ಇತ್ತೀಚಿನ
ದಿನಗಳಲ್ಲಿ ಕೆಲಸದ ಒತ್ತಡದಿಂದ ಎಷ್ಟೇ ಆರೋಗ್ಯಕರವಾಗಿದ್ದರು ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಒತ್ತಡವೆಂಬುದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ನಮ್ಮಲ್ಲಿ ಇರುವ
ಸಹಜ ಭಾವನೆಗಳನ್ನು ಹೊರಹಾಕಲು ಸಾಧ್ಯವಿಲ್ಲದ ಕಾರಣ ಒತ್ತಡ ಹೆಚ್ಚಾಗುತ್ತಿದೆ. ಇದಕ್ಕೆ ದೈಹಿಕವಾಗಿ ಮಾಡುವ ಆಸನಗಳಿಗಿಂತ ಮುದ್ರೆಗಳ ಅಭ್ಯಾಸವೇ ಸೂಕ್ತವಾಗಿದೆ. ಮನುಷ್ಯನಿಗೆ ಚಂದವಾಗಿ ಕಾಣಲು ಇಚ್ಚಿಸುತ್ತಾನೆ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು
ಹರಸಾಹಸ ಪಡುತ್ತಿರುತ್ತಾನೆ. . ಈಗಿನ ಕಾಲದಲ್ಲಿ ಔಷಧಿಗಳಿಗೆ ಮೊರೆ ಹೋಗುತ್ತಾನೆ.
ಕಾರಣ ಕೆಲಸದ ಒತ್ತಡ ಹಾಗೂ ಮಾನಸಿಕ ಒತ್ತಡವೇ ಆಗಿರುತ್ತದೆ. ಇದಕ್ಕೆ ಮನಸ್ಸನ್ನು ಏಕಾಗ್ರತೆಗೊಳಿಸುವುದು ಬಹು ಮುಖ್ಯ ಹಾಗೆಯೇ ಮುದ್ರೆಗಳನ್ನು
ಮಾಡುವುದರಿಂದ ನಾನಾ ರೀತಿಯ ಪ್ರಯೋಜನಗಳನ್ನು ಪಡೆಯಬಹುದು.
ಸಾಮಾನ್ಯವಾಗಿ ಮುದ್ರೆ ಎಂದರೆ ಮೊಹರು ಎಂದರ್ಥ. ಮುದ್ರೆಗಳು ನಮ್ಮ ಕೈ ಬೆರಳುಗಳು ಮತ್ತು ಕೈಗಳ ಸ್ಥಿತಿಯಿಂದ ರೂಪಿಸಿಕೊಳ್ಳುವಂತಹ ಯೋಗವಾಗಿದೆ. ಕೆಲವು ಆರೋಗ್ಯ ಸಮಸ್ಯೆಗಳಿಗೆ ಮುದ್ರೆಗಳು ಔಷಧಿ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತವೆ. ಮುದ್ರೆಗಳು ನಮ್ಮ ಕೈಯಲ್ಲಿನ ಎಲ್ಲಾ ಬೆರಳುಗಳನ್ನು ಉಪಯೋಗಿಸಿ ಮಾಡುವ ವಿವಿಧ ಭಂಗಿಯಾಗಿದೆ. ಬೆರಳುಗಳನ್ನು ಹಾಗೂ ಹೆಬ್ಬೆರಳುಗಳನ್ನು ಸರಿಯಾದ ಕ್ರಮದಲ್ಲಿ ಜೋಡಣೆ ಮಾಡಿ ವಿವಿಧ ರೀತಿಯಲ್ಲಿ ಹಿಡಿದುಕೊಂಡು ಮುದ್ರಾ ಯೋಗವನ್ನು ಮಾಡುವುದರಿಂದ ಹಲವು ರೋಗಗಳನ್ನು ನಿವಾರಿಸಬಹುದು. ನಮ್ಮ ಭಾರತೀಯ ಸನಾತನ ಧರ್ಮದಲ್ಲಿ ಅನೇಕ ಋಷಿಮುನಿಗಳು ಕಂಡುಹಿಡಿದಿರುವಂತಹ ಯೋಗ, ಶಿಲ್ಪಕಲೆ ಮತ್ತು ಅನೇಕ ಮಹತ್ತರ ಕೊಡುಗೆಗಳನ್ನು ಮಾನವ ಕುಲಕ್ಕೆ ನೀಡಿದ್ದಾರೆ. ಪ್ರತಿಯೊಬ್ಬ ಜೀವಿ ಅನೇಕ ಪ್ರತಿಭೆಗಳನ್ನು ಹೊಂದಿರುತ್ತಾರೆ. ಈ ಮುದ್ರೆಗಳನ್ನು ವಿವಿಧ ರೀತಿಯ ಕ್ಷೇತ್ರಗಳಲ್ಲಿ ಉಪಯೋಗಿಸಲ್ಪಡುತ್ತದೆ. ನಮ್ಮ ದೇಹವು ಯಂತ್ರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ನಮ್ಮ ದೇಹವೆಂಬ ಯಂತ್ರವು ಸರಿಯಾದ ಕ್ರಮದಲ್ಲಿ ಕಾರ್ಯನಿರ್ವಹಿಸಬೇಕಾದರೆ ಮುದ್ರೆಗಳನ್ನು ಮಾಡುವುದು ಸೂಕ್ತ. ಯೋಗ ಕ್ರಿಯೆಯಲ್ಲಿ ಮುದ್ರೆಗೆ ವಿಶೇಷ ಸ್ಥಾನವನ್ನು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮುದ್ರೆಗಳ ಬಗ್ಗೆ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ, ಜೊತೆಗೆ ಪ್ರಾಣಶಕ್ತಿಯನ್ನು ಹೆಚ್ಚಿಸುವ ಮುದ್ರೆಯು ಸಂತೋಷದ ಅನುಭವವನ್ನು ನೀಡುತ್ತದೆ ಸಹಜವಾಗಿ ಮಾನವನಲ್ಲಿನ ಮಾನಸಿಕ ಒತ್ತಡ ಹಾಗೂ ಚಿಂತೆಯನ್ನು ದೂರ ಮಾಡುತ್ತದೆ. ಮುದ್ರಾ ಯೋಗವನ್ನು ಮಾಡಲು ಎಲ್ಲಿಬೇಕಾದರೆ ಅಲ್ಲಿ ಸಹಜವಾಗಿಯೇ ಕುಳಿತುಕೊಂಡು ಅಭ್ಯಾಸ ಮಾಡಬಹುದು. ನಾವು ಬಸ್ಸಿನಲ್ಲಿ ಪ್ರಯಾಣಿಸುವಾಗ ಅಥವಾ ಮಲಗಿರುವಾಗ, ನಿಂತಿರುವಾಗ ಅಂತೆಯೇ ಹಾಸಿಗೆಯಲ್ಲಿ ಮಲಗಿರುವಾಗಲು ಸಹ ಮುದ್ರೆಗಳನ್ನು ಮಾಡಬಹುದು.
ಕೆಲವು ತಜ್ಞರು ಹೇಳುವ ಪ್ರಕಾರ ಯಾವುದೇ ಮುದ್ರೆಯನ್ನು ಮಾಡಲು ಕನಿಷ್ಠ 15 ನಿಮಿಷಗಳಿಂದ 30 ನಿಮಿಷಗಳ ವರೆಗೆ ಮಾಡುವುದಾದರೆ ವಿಶೇಷ ಫಲ
ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ತಾರೆಯರು
ಮುದ್ರೆಗಳನ್ನು ಮಾಡುತ್ತಾರೆ. ಸಾಮಾನ್ಯ ವರ್ಗದವರು ಸಹ ಈ
ಮುದ್ರೆಗಳನ್ನು ಅಭ್ಯಾಸ ಮಾಡಲು ಶುರು ಮಾಡಿದ್ದಾರೆ. ಮುದ್ರೆಗಳನ್ನು
ಮಾಡುವುದಕ್ಕೆ ಯಾವುದೇ ರೀತಿಯ ವಯಸ್ಸಿನ ಭೇದಭಾವ ಇರುವುದಿಲ್ಲ.
ಮುದ್ರೆಗಳನ್ನುಮಾಡಲು ಯುವಕರು, ಮಹಿಳೆಯರು, ಪುರುಷರು ಯಾವುದೇ ರೀತಿಯ ವಯಸ್ಸಿನ ಮಿತಿ
ಇರುವುದಿಲ್ಲ. ಆದರೆ ಮುದ್ರೆಗಳನ್ನು ಮಾಡುವಾಗ ತಜ್ಞರ ಅಥವಾ ಯೋಗ ಗುರುಗಳ
ಸಲಹೆಯನ್ನು ಪಡೆಯುವುದು ಅವಶ್ಯಕತೆ ಇರುತ್ತದೆ. ಏಕೆಂದರೆ ಕೆಲವು
ಮುದ್ರೆಗಳು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ, ಇನ್ನೂ ಕೆಲವು
ಮುದ್ರೆಗಳು ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ ಹಾಗೂ ಚಿಕ್ಕ ಮಕ್ಕಳು ಮುದ್ರಾ ಯೋಗವನ್ನು
ಅಭ್ಯಾಸ ಮಾಡುವುದಕ್ಕೂ ಮೊದಲು ಯೋಗ ಗುರುಗಳ ಸಲಹೆಯನ್ನು
ಪಡೆಯುವುದು ಉತ್ತಮ. ಯೋಗ ಮುದ್ರೆಯಲ್ಲಿ ನಾನಾ ರೀತಿಯ
ಮುದ್ರೆಗಳನ್ನು ನಾವು ನೋಡಬಹುದು ಕೆಲವು ಯೋಗ ಮುದ್ರೆಗಳು ಮನಸ್ಸಿನಲ್ಲಿ ಶಾಂತತೆಯನ್ನು
ಕಾಪಾಡುತ್ತದೆ. ನಮ್ಮ ಕೈ ಬೆರಳುಗಳಲ್ಲೇ ನಮ್ಮ ಆರೋಗ್ಯ ಅಡಗಿದೆ ಎಂಬುದು ಮುದ್ರಾ ಯೋಗವನ್ನು ಮಾಡುವುದರಿಂದ ಗೊತ್ತಾಗುತ್ತದೆ ಅಂತಹ
ಮುದ್ರಾಯೋಗಗಳು ನಾನಾ ರೀತಿಯಲ್ಲಿ ನಮ್ಮ ಆರೋಗ್ಯವನ್ನು ಸುಧಾರಿಸುವುದರಲ್ಲಿ ಸಹಕಾರಿಯಾಗಿದೆ. ಅವುಗಳಲ್ಲಿ ಕೆಲವು ಪ್ರಕಾರಗಳನ್ನು ಇದರಲ್ಲಿ ತಿಳಿಯಬಯಸುತ್ತೇನೆ. ಈ ಕೆಳಗೆ ನೀಡಿರುವ ಪ್ರಕಾರಗಳು ಸ್ವಲ್ಪಮಟ್ಟಿಗೆ ನಮ್ಮ ಜೀವನದಲ್ಲಿ ಸುಧಾರಣೆಯಾಗಬಹುದು. ಇಲ್ಲಿ ಕೆಲವು ಪ್ರಕಾರಗಳನ್ನು
ನೀಡಲಾಗಿದೆ ಅವುಗಳು ವಿವಿಧ ರೀತಿಯ ಮುದ್ರೆಗಳಾಗಿವೆ ಹಾಗೂ ಆ ಮುದ್ರೆಗಳ ಪ್ರಯೋಜನಗಳನ್ನು
ತಿಳಿದುಕೊಳ್ಳೋಣ.
1. ಜ್ಞಾನ ಮುದ್ರಾ:
ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆಯು ಹೆಚ್ಚಾಗಿ ಕಾಡುತ್ತಿದೆ ಹಾಗೆಯೇ ಕೋಪವು ಸಹ ನಮಗೆ ಅರಿವೇ ಇಲ್ಲದಂತೆ ಬರುತ್ತದೆ ಇದಕ್ಕೆ ಈ ಮುದ್ರಾ ಯೋಗವೂ ತುಂಬಾ ಸಹಕಾರಿಯಾಗುತ್ತದೆ
ಇದು ಜ್ಞಾನ ಮತ್ತು ಏಕಾಗ್ರತೆಗೆ ಇರುವ ಅತ್ಯಂತ ಸಾಮಾನ್ಯ
ಯೋಗ ಮುದ್ರಾ. ಪದ್ಮಾಸನ ಹಾಕಿಕೊಂಡು ಬೆಳಗ್ಗೆ ಈ ಮುದ್ರಾವನ್ನು ಮಾಡಬೇಕು. ಇದು ಏಕಾಗ್ರತೆ
ಹೆಚ್ಚಿಸುತ್ತದೆ, ನಿದ್ರಾಹೀನತೆ ಪರಿಹರಿಸುತ್ತದೆ ಮತ್ತು
ಕೋಪದ ಸಮಸ್ಯೆ ನಿಭಾಯಿಸಲು ನೆರವಾಗುತ್ತದೆ.
2.
ವಾಯು
ಮುದ್ರಾ:
ಮನುಷ್ಯನಿಗೆ ಎದೆ ಉರಿ ಗ್ಯಾಸ್ಟ್ರಿಕ್
ಸಾಮಾನ್ಯವಾಗಿಬಿಟ್ಟಿದೆ. ಇದಕ್ಕೆ ಪಿತ್ತವು ಸಹ
ಕಾರಣವಾಗಿರುತ್ತದೆ ಚಂದ್ರ ನಾಡಿ ದೇಹವನ್ನು ತಂಪಾಗಿಸುತ್ತದೆ ಸೂರ್ಯ ನಾಡಿ ಉಷ್ಣವನ್ನು
ಹೆಚ್ಚಿಸುತ್ತದೆ ಈ ಮುದ್ರಾ ಯೋಗದಿಂದ ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳಬಹುದು
ಈ ಮುದ್ರಾವು ನಿಮ್ಮ ದೇಹದ ಗಾಳಿಯನ್ನು ಸಮತೋಲನದಲ್ಲಿಡಲು
ನೆರವಾಗುತ್ತದೆ. ಈ ಮುದ್ರಾವನ್ನು ನಿಂತು, ಕುಳಿತು ಅಥವಾ ಮಲಗಿ ದಿನದ ಯಾವುದೇ ಸಮಯದಲ್ಲೂ ಮಾಡಬಹುದು. ಇದು ದೇಹದಲ್ಲಿರುವ
ಹೆಚ್ಚುವರಿ ಗಾಳಿಯನ್ನು ಹೊರಹಾಕಿ ಗ್ಯಾಸ್ ನಿಂದ ಉಂಟಾಗುವ ಎದೆನೋವನ್ನು ಕಡಿಮೆ ಮಾಡುತ್ತದೆ.
3. ಅಗ್ನಿಮುದ್ರಾ:
ಇದು ದೇಹದಲ್ಲಿನ ಅಗ್ನಿಯ ಅಂಶವನ್ನು ಸಮತೋಲನದಲ್ಲಿಡುತ್ತದೆ. ಈ ಮುದ್ರಾವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಇದು ತೂಕ ಇಳಿಸುವ ಮುದ್ರಾ. ಇದು ಕೊಬ್ಬನ್ನು ಕರಗಿಸಿಸುತ್ತದೆ ಮತ್ತು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಕೆಲವು ವ್ಯಕ್ತಿಗಳಿಗೆ ಬೊಜ್ಜು ಹೆಚ್ಚಾಗಿ ಹೊಟ್ಟೆಯು ಉಬ್ಬಿರುತ್ತದೆ ಇದಕ್ಕೆ ದೇಹದಲ್ಲಿನ ಕೊಬ್ಬಿನಂಶವೇ ಕಾರಣ ಇಂತಹ ಕೊಬ್ಬಿನಾಂಶವನ್ನು ಕಡಿಮೆ ಮಾಡಲು ಈ ಮುದ್ರಾ ಯೋಗವು ಸಹಕಾರಿಯಾಗುತ್ತದೆ
4. ವರುಣ ಮುದ್ರಾ:
ಈ ಮುದ್ರಾವು ನಿಮ್ಮ ದೇಹದಲ್ಲಿರುವ ನೀರಿನ ಅಂಶವನ್ನು ಸಮತೋಲನದಲ್ಲಿಡುತ್ತದೆ. ಇದು ನಿಮ್ಮ ದೇಹದ ಸೌಂದರ್ಯ ಹೆಚ್ಚಿಸುತ್ತದೆ. ನಿಮ್ಮ ಚರ್ಮಕ್ಕೆ ಕಾಂತಿ ನೀಡುತ್ತದೆ. ಯಾಕೆಂದರೆ ದೇಹದಲ್ಲಿರುವ ನೀರಿನ ಅಂಶಕ್ಕೆ ಚಾಲನೆ ನೀಡಿ ಅದು ಚರ್ಮವನ್ನು ಪೋಷಿಸುತ್ತದೆ.
5. ಪ್ರಾಣ ಮುದ್ರಾ:
ಈ ಮುದ್ರಾವು ಜೀವನಕ್ಕೆ ಸಂಬಂದಿಸಿದ್ದು, ದಿನದ ಯಾವುದೇ ಸಮಯದಲ್ಲೂ ಮಾಡಬಹುದು. ಈ ಯೋಗ ಮುದ್ರಾವು ರೋಗನಿರೋಧಕ ಶಕ್ತಿಯನ್ನು ಸುಧಾರಿಸಿ, ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಆಯಾಸವನ್ನು ಹೋಗಲಾಡಿಸಿ ಹೆಚ್ಚು ಉಲ್ಲಾಸದಿಂದ ಇರಲು ನೆರವಾಗುತ್ತದೆ.
6. ಪೃಥ್ವಿ ಮುದ್ರಾ:
ಈ ಮುದ್ರಾವು ನಿಮ್ಮ ದೇಹದಲ್ಲಿ ಬ್ರಹ್ಮಾಂಡದ ಭೂಮಿಯ ಶಕ್ತಿಯನ್ನು ಉತ್ತೇಜಿಸುತ್ತದೆ. ಈ ಮುದ್ರಾವು ರಕ್ತದ ಚಲನೆ, ತಾಳ್ಮೆ ಹೆಚ್ಚಿಸುತ್ತದೆ. ಇದು ನಿಮ್ಮ ದೇಹದ ಎಲುಬು ಮತ್ತು ಸ್ನಾಯುಗಳ ಬಲವರ್ಧಿಸುತ್ತದೆ.
7. ಶೂನ್ಯ ಮುದ್ರಾ:
ಶೂನ್ಯ ಮುದ್ರಾವು ಮುಖ್ಯವಾಗಿ ಸೂರ್ಯನ ಶಕ್ತಿಯನ್ನು ಸ್ಮರಿಸುತ್ತದೆ. ಸೂರ್ಯನ ಶಕ್ತಿಯನ್ನು ಪಡೆಯಲು ಮುಂಜಾನೆ ವೇಳೆ ಈ ಮುದ್ರಾವನ್ನು ಅಭ್ಯಸಿಸಬೇಕು.
8. ಲಿಂಗ ಮುದ್ರಾ:
ಈ ಮುದ್ರೆಯು ಪುರುಷನ ಜನನಾಂಗದ ಸಂಕೇತವಾಗಿದೆ ಮತ್ತು ಇದರಿಂದಾಗಿ ಇದು ದೇಹದಲ್ಲಿ ಉಷ್ಣವನ್ನು ಉಂಟುಮಾಡುತ್ತದೆ. ಇದು ಕಾಮಾಸಕ್ತಿಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಶೀತಕ್ಕೆ ಸಂಬಂಧಪಟ್ಟ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ.
9. ಅಪಾನ ಮುದ್ರಾ:
ಇದು ಬಹುಉಪಯೋಗಿ ಮುದ್ರಾವಾಗಿದ್ದು, ಪ್ರತಿಯೊಬ್ಬರಿಗೂ ನೆರವಾಗುತ್ತದೆ. ಅಪಾನ ಮುದ್ರಾವು ವಿಷಕಾರಿ ನೀರಿನಿಂದ ನಿಮ್ಮ ದೇಹವನ್ನು ಶುಚಿಗೊಳಿಸುತ್ತದೆ. ಮೂತ್ರದ ಸಮಸ್ಯೆ ನಿವಾರಿಸಲು ಮತ್ತು ಕರುಳಿನ ಚಲನೆಗಳನ್ನು ನಿಯಮಿತವಾಗಿಡುತ್ತದೆ.
No comments:
Post a Comment